

3rd December 2025

ನೇಸರಗಿ- ನೇಸರಗಿ ಭಾಗದ ಯುವಕರಿಗೆ ಉನ್ನತ ಶಿಕ್ಷಣದ ಅವಶ್ಯಕತೆಯನ್ನು ಪೂರೈಸಲು ಕಾಲೇಜಿನ ಅಭಿವೃದ್ದಿಗಾಗಿ ಕೊಠಡಿ ನಿರ್ಮಾಣ ಕಾಮಗಾರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಮಂಗಳವಾರ ಗ್ರಾಮದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ೨೦೦ ಲಕ್ಷ ರೂ. ಗಳ ಅನುದಾನದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಿತ್ತೂರ ಮತಕ್ಷೇತ್ರದ ನೇಸರಗಿ ಭಾಗದ ಮೂಲಭೂತ ಸೌಕರ್ಯಕ್ಕೆ ಅನುದಾನ ಒದಗಿಸಿ ಅಭಿವೃದ್ದಿಗೆ ಪ್ರಯತ್ನಿಸಲಾಗುವುದು. ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಅಭಿವೃದ್ಧಿಗೆ ಒತ್ತು ನೀಡಿ ಕಾಲೇಜಿನ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗುವುದು ಎಂದರು.
ಕಾಲೇಜು ಅಭಿವೃದ್ದಿ ಮಂಡಳಿ ಉಪಾಧ್ಯಕ್ಷ ಅಡಿವೆಪ್ಪ ಮಾಳನ್ನವರ, ಯುವ ದುರೀಣರಾದ ಸಚೀನ ಪಾಟೀಲ, ಬಸವರಾಜ ಚಿಕ್ಕನಗೌಡರ, ಪ್ರಾಚಾರ್ಯ ಡಾ.ಎಪ್.ಡಿ.ಗದ್ದಿಗೌಡರ, ದುರೀಣರಾದ ಬಾಳಪ್ಪ ಮಾಳಗಿ, ಆಡಳಿತ ಮಂಡಳಿ ಸದಸ್ಯರಾದ ಸುರೇಶ ಲೆಂಕನಟ್ಟಿ, ವಿನಾಯಕ ಮಾಸ್ತಮರಡಿ, ರಾಯನಗೌಡ ಪಾಟೀಲ, ಸುನೀಲ ಪಿಸೆ, ನಿಂಗಪ್ಪ ತಳವಾರ, ಯಮನಪ್ಪ ಪೂಜೇರಿ, ಚನಗೌಡ ಪಾಟೀಲ, ಮಂಜು ಮದೆನ್ನವರ, ನಜೀರ ತಹಶೀಲ್ದಾರ, ಅನ್ವರ ಮನಿಯಾರ, ಪುಂಡಲೀಕ ಹಮ್ಮನ್ನವರ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025